ತೋಚಿದ್ದು ಗೀಚು - ಕವನಗಳು
ತೋಚಿದ್ದು ಗೀಚು - ಕವನಗಳು - ಯತೀಂದ್ರ ಆಚಾರ್ಯ ನಡಿಗೆಯಾ ಪ್ರತಿ ಹೆಜ್ಜೆಗೂ ಮನವು ಕೇಳಿದೆ ನಿನ್ನಯಾ ಅಪ್ಪಣೆ ನನ್ನಯಾ ಪ್ರತಿ ಮಾತಿನ ಎಲ್ಲಾ ಭಾವವೂ ನಿನಗೆಯೇ ಅರ್ಪಣೆ ಇನಿಯಾ ಈ ಸಂಜೆಯು ಏನಿತು ಹಿತವಾಗಿದೇ ಬಳಿಯಲಿ ನೀ ಸುಳಿದಾಡಲು ಮನವು ಹಗುರಾಗಿದೆ ಈಗ ಬೆಚ್ಚನೆ ಅಪ್ಪುಗೆ ಸಾಕೆನು ಸಲ್ಲಾಪಕೆ..! <3 <3 <3 <3 <3 <3 <3 ಮೊದಲನೇ ನೋಟದೆ ಸೆರೆಯಾದೆ ನನ್ನಲಿ, ಸೆರೆಯಾಳು ನೀನು, ಶಿಕ್ಷೆ ನನಗಿಲ್ಲಿ ಕಾಡಿಲ್ಲ ಯಾರು ಹಿಂದೆಂದೂ ಈ ಪರಿಯಲಿ, ಮುತ್ತಿರುವೆ ನೀ.. ಪ್ರತಿ ಇರುಳು ಕನಸಲಿ, ಪ್ರತಿ ಇರುಳು ಕನಸಲಿ ಸಮಯ ಸರಿಯುತಿದೆ ನಿನ್ನ ನೆನಪಿನಪ್ಪುಗೆಯಲ್ಲಿ, ಬಂಧಿಸಿಹೆ ನೀ ಪ್ರೀತಿ ಸಂಕೋಲೆಯಲಿ ದಾಳಿಯಾಗಿದೆ ನಿನ್ನ ಮಾತು ಮುತ್ತಿನಲಿ, ಸೆರೆಯಾಳು ನೀನು ಶಿಕ್ಷೆ ನನಗಿಲ್ಲಿ, ಸೆರೆಯಾಳು ನೀನು, ಶಿಕ್ಷೆ ನನಗಿಲ್ಲಿ <3 <3 <3 <3 <3 <3 ಮುಗಿಲಾ ನೋಡುತಾ ಮಳೆಗೆ ಕಾಯುವಾ ಕಣ್ಣಿಗೆ ಸಿಲುಕಿದೆ ಗಾಳಿಯಾ ಕಸಗಳು, ಬಿತ್ತಿದಾ ಬೀಜವು ಹೊರಗೆ ಇಣುಕಲು ತೇವದಾ ಕೊರತೆಗೆ ಬೆಳೆಯಿಂದು ಕಂಗಾಲು... ಉ...