Akaashada Gaali Lyrics | Kyaabre | Tharle Box
ಆಕಾಶದಾ ಗಾಳಿ ಬಿರುಗಾಳಿ Lyrics Composed by: Siddhant KS & Geeth Vaz Lyrics: MC Bijju, Siddhant KS, Vijay Krishna ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ನನ್ನೆಡೆ ಆ ಬಾಣದಾ ದಾರಿ ಮರುದಾರಿ, ನಿನ್ನದೇ ನನ್ನೆಡೆ ಬಿರುಗಾಳಿ ಬೀಸೊಂದು ಗಾಳಿ, ಈ ಬಾರಿ ನನ್ನೆಡೆ ನಡುದಾರಿ ನಾ ನಿಂತ ದಾರಿ ಪ್ರತಿಬಾರಿ ನಿನ್ನೆಡೆ ಆಕಾಶದಾ ಗಾಳಿ ಬಿರುಗಾಳಿ, ನನ್ನದೇ ನಿನ್ನೆಡೆ ಆ ಬಾಣದಾ ದಾರಿ ಮರುದಾರಿ, ನಿನ್ನದೇ ನನ್ನೆಡೆ ನನ್ನೆಡೆ ಸಣ್ಣದೊಂದು ಕಲ್ಪನೆ ಸಾವಿರಾರು ಯಾತನೆ ಏನೋ ಹೊತ್ತುಕೊಂಡು ಕಾಣೆಯಾಯ್ತು ಯಾಕೋ ಬೇಗನೆ ಸೋಲು ಸುಂಕ ಕಟ್ಟುತ್ತಾ ಗೆಲ್ಲೊ ಬಿಂಕ ನಿಶ್ಚಿತ ಕಡಿವಾಣ ಬಾನದಾರಿಗಿದು ಎಂಥಾ ಅದ್ಭುತ ಗರಿಗೇಕೆ ಇಲ್ಲಿ ಗಾಳಿಯಾ ಭಯಾ ಅಂಜದೆ ಸಾಗಿಹೆ ಬಿರುಗಾಳಿ ಗರಿ ಕಂಡು ವಿಸ್ಮಯಾ ಸ್ವಂತಿಕೆ ತಂದಿದೆ ಬಿರುಗಾಳಿ ಬೀಸೊಂದು ಗಾಳಿ, ಈ ಬಾರಿ ನನ್ನೆಡೆ ನಡುದಾರಿ ನಾ ನಿಂತ ದಾರಿ ಪ್ರತಿಬಾರಿ ನಿನ್ನೆಡೆ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ